ಪ್ರಾಯೋಜಕರು
ಅವಿರತ ಸಂಸ್ಥೆಯ ಅಂತರ್ಜಾಲ ತಾಣದ ನಿರ್ಮಾಣ ಹಾಗೂ ನಿರ್ವಹಣೆಯ ಹೊಣೆಯನ್ನು ಪ್ರಶಾಂತ್ ಕಲ್ಲೂರ್ ಅವರ ನೇತೃತ್ವದ "ಬಾನುಲಿ ಸಂಸ್ಥೆ "ಹೊತ್ತಿದೆ ಎಂದು ಹೇಳಲು ಸಂತಸವಾಗುತ್ತದೆ. ಅಚ್ಚುಕಟ್ಟಾದ ಕೆಲಸ ನಿರ್ವಹಣೆ ಹಾಗೂ ವೃತ್ತಿಪರತೆಯನ್ನು ಮೆರೆವ ಬಾನುಲಿ ನ ಉದ್ಯೋಗಿಗಳು, ತಮ್ಮ ಕೆಲಸದ ಒತ್ತಡದ ನಡುವೆಯೂ ಕನ್ನಡಕ್ಕಾಗಿ, ಸಾಮಾಜಿಕ ಏಳಿಗೆಗೆಗಾಗಿ ಕೆಲಸ ಮಾಡಲು ಸಿದ್ಧರಿರುವುದು ಹರ್ಷದಾಯಕ ಸಂಗತಿ. ಬಾನುಲಿ ನ ಸಿಬ್ಬಂದಿಗಳಾದ ವಿನಾಯಕ್ ತಾಲೂಕರ್, ಅಮಿತ್ ನಾಝರೆ, ರಂಗನಾಥ್ ಹಾಗೂ ಇನ್ನಿತರ ಕೆಲಸಗಾರರು ಅವಿರತ ಸಂಸ್ಥೆಯ ಅಂತರ್ಜಾಲ ತಾಣ ಶ್ರಮವಹಿಸಿ, ಆಸಕ್ತಿಯಿಂದ ರೂಪಿಸಿದ್ದಾರೆ. ಇವರೆಲ್ಲರ ಹಿಂದೆ ನಿಂತು ಪ್ರತಿ ಹೆಜ್ಜೆಯಲ್ಲಿ ಅವಿರತ ತಾಣಕ್ಕೆ ಸರಿಯಾದ ರೂಪು ನೀಡಿದ ಐಡಿ ಟೆಕ್ನಾಲಜಿಸ್ ನ ಮಾಲೀಕ ಪ್ರಶಾಂತ್ ಕಲ್ಲೂರ್ ಅವರಿಗೆ ಅವಿರತ ಸಂಸ್ಥೆ ಆಭಾರಿಯಾಗಿದೆ.
