|
ಅವಿರತ-ತಾಯ್ನಾಡು ಹಾಗೂ ಮಾನವೀಯತೆಗಾಗಿ ಸತತವಾಗಿ ದುಡಿಯುವ ಅದಮ್ಯ ಉತ್ಸಾಹದ ಯುವಪಡೆ. ಸಾಮಾಜಿಕ ಕಳಕಳಿಯುಳ್ಳ ಉತ್ಸಾಹಿಗಳನ್ನು ಹೊಂದಿರುವ ನಮ್ಮ ಸಂಸ್ಥೆಯು ಮಾರ್ಚ್ ೨೫,೨೦೦೭ರ ಭಾನುವಾರದಂದು ಪ್ರಾರಂಭವಾಯಿತು.

ಮಲ್ಲೇಶ್ವರಂನಲ್ಲಿರುವ ಶ್ರೀಗಂಧ ಪ್ರಿವ್ಯೂ ಥಿಯೇಟರ್‌ನಲ್ಲಿ ನಡೆದ ಪುಟ್ಟ ಸಮಾರಂಭದಲ್ಲಿ ಅವಿರತ ಸಂಘಟನೆಯ ಧ್ಯೇಯ, ನಿಲುವು ಮತ್ತುಕಾರ್ಯ ಚಟುವಟಿಕೆಗಳ ಬಿಂಬಿಸುವ,ಅಂತರ್ಜಾಲ ತಾಣ(www.aviratha.org)ದ ಉದ್ಘಾಟನೆಯನ್ನು ಖ್ಯಾತ ನಿರ್ದೇಶಕ ಶ್ರೀಗಿರೀಶ್ ಕಾಸರವಳ್ಳಿಯವರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ಇದೇ ಸಂದರ್ಭದಲ್ಲಿ ವಿಪ್ರೋ ಸಂಸ್ಥೆಯ ಸಹೃದಯರಿಗಾಗಿ 'ನಾಯಿ ನೆರಳು' ಚಿತ್ರದ ವಿಶೇಷ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮವನ್ನುಏರ್ಪಡಿಸಲಾಗಿತ್ತು.
|