ನಮ್ಮ ಬಗ್ಗೆ


ಅವಿರತ-ತಾಯ್ನಾಡು ಹಾಗೂ ಮಾನವೀಯತೆಗಾಗಿ ಸತತವಾಗಿ ದುಡಿಯುವ ಅದಮ್ಯ ಉತ್ಸಾಹದ ಯುವಪಡೆ.

 

ಅವಿರತ ಸಾಮಾಜಿಕ ಕಳಕಳಿಯುಳ್ಳ ಉತ್ಸಾಹಿಗಳ ತಂಡ.ಅವಿರತ ಸಂಸ್ಥೆಯು ಮಾರ್ಚ್ 25 2007 ರಂದು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರಿಂದ ಉದ್ಘಾಟನೆಯಾಯಿತು. ಆವಿರತದಲ್ಲಿ ಸಾಹಿತಿಗಳಿಂದ ಹಿಡಿದು ಸಾಫ್ಟ್ ವೇರ್ ಇಂಜಿನಿಯರ್‌ಗಳು, ವೈದ್ಯರು, ಬುದ್ಧಿಜೀವಿಗಳು ತತ್ವಜ್ಞಾನಿಗಳು, ತಂತ್ರಜ್ಞರು, ವಿಜ್ಞಾನಿಗಳು , ನಾಗರೀಕರು, ರೈತರು, ಉದ್ಯಮಿಗಳು ಹೀಗೆ ಸಮಾಜದ ಎಲ್ಲ ವರ್ಗದ ಜನರಿಂದ ರೂಪಿತವಾಗಿದೆ. ತಾಯ್ನಾಡನ್ನು ತರ್ಕಬದ್ಧವಾಗಿ, ನ್ಯಾಯಯುತವಾಗಿ ಮುನ್ನಡೆಸಲು ಪಣತೊಟ್ಟಿರುವ ಬದಲಾವಣೆಯ ಹರಿಕಾರರಿದ್ದಾರೆ.

 

ನಾವು ಮಾಡುವ ಎಲ್ಲಾ ಕೆಲಸಗಳಲ್ಲಿ ಕನ್ನಡತನವನ್ನು ಬಿಂಬಿಸುತ್ತ, ಮೂಲಭೂತ ಸಮಸ್ಯೆಗಳತ್ತ ಗಮನಹರಿಸಲಾಗುವುದು. ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಪರಿಸರ ಹಾಗು ಸಾಮಾಜಿಕ ಸಮಸ್ಯೆಗಳತ್ತ ವಿಭಿನ್ನ ರೀತಿಯಲ್ಲಿ ಗಮನಹರಿಸಲಾಗುವುದು. ಅವಿರತದಲ್ಲಿ ಎಲ್ಲಾ ಕ್ಷೇತ್ರದ ಪರಿಣತರ ಸದಸ್ಯರು ಇದ್ದು, ನಿರಂತರವಾಗಿ ತಮ್ಮನ್ನು ನಾಡಿನ ಏಳಿಗೆಗೆ ತೊಡಗಿಸಿಕೊಳ್ಳಲು ಸಿದ್ಧರಿದ್ದಾರೆ.

 

ಬನ್ನಿ ಅವಿರತ - ತಂಡಕ್ಕೆ ನೀವು ಸೇರಿ, ನಮ್ಮ ಕೈ ಜೋಡಿಸಿ ಕನ್ನಡ ನಾಡು, ನುಡಿಯನ್ನು ಬೆಳೆಸೋಣ.

 

ಎಲ್ಲಾ ಸಹೃದಯ ಗೆಳೆಯರಿಗೆ ಇದು ಮುಕ್ತ ಆಹ್ವಾನ, ನಾಡನ್ನು ಬೆಳೆಸಲು ನಿಮ್ಮಲ್ಲಿ ಹೊಸ ವಿಚಾರಗಳಿವೆಯೇ? ನಮ್ಮ ಕಾರ್ಯಕ್ರಮಗಳು ಹಾಗು ಚಟುವಟಿಕೆಗಳಲ್ಲಿ ನೀವು ಪಾಲ್ಗೊಳ್ಳಬೇಕೇ? ಹಾಗಾದರೆ ನಿಮಗಾಗಿ - ಅವಿರತ

 

 
 
ಹಕ್ಕುಗಳು@ಅವಿರತ.ಆರ್ಗ್ © 2007 All rights reserved