• # 73, 3rd stage 2nd main road, Vinayaka layout, Vijayanagar, Bangalore
  • 9880086300,9845988444,
  • contact@aviratha.org
IMG-20160606-WA0003

Vignaana – Vismaya

EVENT DETAILS :

  • Start Date:
  • End Date:
  • Start Time:
  • End Time:
  • Location:

ORGANIZER :

  • Organized by:Aviratha
  • Mobile:9880086300,9845988444
  • Email:contact@aviratha.org
  • Website:www.aviratha.org
  • Address:# 73, 3rd stage 2nd main road, Vinayaka layout, Vijayanagar, Bangalore

ನಾಡು, ನುಡಿ, ಸಂಸ್ಕೃತಿ, ಕಲೆ ಶಿಕ್ಷಣಕ್ಕಾಗಿ ಸದಾ ಸಕ್ರಿಯವಾಗಿ ದುಡಿಯುತ್ತಿರುವ ಅವಿರತದ ಗ್ರಾಮೀಣ ಶಿಕ್ಷಣ ಕಲ್ಪನೆಯಡಿ ರೂಪುಗೊಂಡ ಒಂದು ಅರ್ಥಪೂರ್ಣ ವಿನೂತನ ಯೋಜನೆಯೇ “ವಿಜ್ಞಾನ ವಿಸ್ಮಯ”.

ವಿಜ್ಞಾನ ವಿಸ್ಮಯದ ಧ್ಯೇಯೋದ್ದೇಶಗಳು
*ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮಾನೋಭಾವ ಬೆಳೆಸುವುದು.
*ವಿಜ್ಞಾನವನ್ನು ತಮ್ಮ ಸುತ್ತಲ ಪರಿಸರದಲ್ಲಿ ಜರುಗುವ ನೈಸರ್ಗಿಕ ಕ್ರಿಯೆಗಳನ್ನು ಅವಲೋಕಿಸಿ ಅರ್ಥೈಸಿಕೊಳ್ಳುವುದು ಹೇಗೆಂದು ಅರಿಯಲು ಸಹಕಾರಿಯಾಗುವುದು.
*ಪಠ್ಯದಲ್ಲಿನ ವಿಜ್ಞಾನವನ್ನು ಪ್ರಯೋಗಗಳ ಮೂಲಕ ಕಲಿಸುವುದು.

ಕಾರ್ಯಾಗಾರದ ರೂಪುರೇಶ
* ಕಾರ್ಯಾಗಾರದ ನಂತರವೂ ವಿಧ್ಯಾರ್ಥಿಗಳು ಮತ್ತೆ ಮತ್ತೆ ಪ್ರಯೋಗ ಮಾಡಿ ಅರಿಯಲು ಅನುಕೂಲವಾಗಲೆಂದು ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ದೊರಕುವಂತ ವಸ್ತುಗಳನ್ನಿಟ್ಟುಕೊಂಡು ಪ್ರಯೋಗಗಳನ್ನು ರೂಪಿಸಲಾಗುತ್ತದೆ.
*ಪ್ರಯೋಗದ ಕ್ರಮವನ್ನು ಆದಷ್ಟು ಮಕ್ಕಳಲ್ಲಿ ಪ್ರಶ್ನಾರ್ಥಕ ಮಾನೋಭಾವ ಮೂಡಿಸಲು ಮತ್ತು ಚಿಂತನೆಗೆ ತೊಡಗಿಸಿಕೊಳ್ಳುವಂತೆ ರೂಪಿಸಲಾಗುತ್ತದೆ. ಪ್ರಯೋಗದ ಪ್ರತಿಯೊಂದು ಹಂತದಲ್ಲೂ ಆಗುವ ಬದಲಾವಣೆಗೆ ಉತ್ತರ ಹುಡುಕುತ್ತಾ ಕೊನೆಗೆ ಆ ಕ್ರಿಯೆಯ ಹಿಂದಿನ ವೈಜ್ಞಾನಿಕ ಸಿದ್ಧಾಂತವನ್ನು ಶೋಧಿಸಿ ಅರ್ಥಮಾಡಿಕೊಳ್ಳಲಾಗುತ್ತದೆ.
*ಕಾರ್ಯಾಗಾರಕ್ಕೆ ಹೆಚ್ಚಾಗಿ ಗ್ರಾಮೀಣ ಪ್ರೌಢ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ಒಂದು ದಿನದ ಕಾರ್ಯಾಗಾರ ೪ ಗಂಟೆಗಳ ಅವಧಿಯದಾಗಿರುತ್ತದೆ.
*ಸುಮಾರು ೫೦ ವಿಧ್ಯಾರ್ಥಿಗಳನ್ನೊಳಗೊಂಡ ಒಂದು ಕಾರ್ಯಾಗಾರಕ್ಕೆ ೫-೬ ಅವಿರತ ಬಳಗದ ಸದಸ್ಯರು ಭೇಟಿ ಇತ್ತು ಕಲಿಸಿ, ಕಲಿತು ಬರುತ್ತಾರೆ. ಇತ್ತೀಚೆಗೆ ಅವಿರತದ ಸದಸ್ಯರೇ ಸಂಪನ್ಮೂಲ ವ್ಯಕ್ತಿಗಳಾಗಿ ಕಲಿಸುತ್ತಿರುವುದು ಸಂತಸದ ವಿಚಾರ.
*ಪ್ರತಿ ಕಾರ್ಯಾಗಾರಕ್ಕೆ ಪೂರ್ವ ತಯಾರಿಯಾಗಿ ಭಾಗವಹಿಸುವ ಸದಸ್ಯರು ಸೇರಿ ಕಾರ್ಯಾಗಾರದಲ್ಲಿ ಮಂಡಿಸುವ ವಿಜ್ಞಾನದ ಸಿದ್ದಾಂತ, ಅದಕ್ಕಾಗಿ ಬಳಸಲಿರುವ ಪ್ರಯೋಗದ ಬಗ್ಗೆ ಚರ್ಚಿಸಿ ಕಾರ್ಯಾಗಾರಕ್ಕೆ ಸಿದ್ದಗೊಳ್ಳುತ್ತಾರೆ.
*ಅವಶ್ಯವಿದ್ದಾಗ KRVP, JNP ಮುಂತಾದ ವಿಜ್ಞಾನ ಸಂಸ್ಥೆಗಳ ನೆರವನ್ನು ಪಡೆಯಲಾಗುತ್ತದೆ.
*ಕಾರ್ಯಾಗಾರಕ್ಕೆ ತಗುಲುವ ಎಲ್ಲ ವೆಚ್ಚವನ್ನು ಅವಿರತ ಭರಿಸುತ್ತಿದೆ.